ನಳಕೂಬರ 2 -
ನಾಗಚಂದ್ರ ಕವಿಯ ಕನ್ನಡ ರಾಮಚಂದ್ರಚರಿತ ಪುರಾಣ ಅಥವಾ ಪಂಪರಾಮಾಯಣ ಎಂಬ ಜೈನರಾಮಾಯಣದ ರಾವಣ ದಿಗ್ವಿಜಯ ವರ್ಣನೆಯ ಸಂದರ್ಭದಲ್ಲಿ ಬರುವ ಒಂದು ಪಾತ್ರ. ಇಲ್ಲಿ ಇಂದ್ರನ ಲೋಕಪಾಲಕನಾದ ಈತ ಅಭೇದ್ಯ ಕೋಟೆಯುಳ್ಳ ದುರ್ಲಂಘ್ಯಪುರವನ್ನು ಆಳುತ್ತಿದ್ದ. ಒಮ್ಮೆ ಈತನ ಹೆಂಡತಿ ಉಪರಂಭೆ ರಾವಣನಲ್ಲಿ ವ್ಯಾಮೋಹಗೊಂಡಳು. ಅವಳ ಇಂಗಿತವನ್ನು ಅರಿತ ರಾವಣ ಮೊದಲು ಒಪ್ಪಿದವನಂತೆ ನಟಿಸಿ ಅವಳಿಂದ ಕೋಟೆಯನ್ನು ಭೇದಿಸುವ ಸಾಲಭಂಜಿನೀ ವಿದ್ಯೆಯನ್ನು ತಿಳಿದು ಕೋಟೆಯನ್ನೊಡೆದು ಒಳನುಗ್ಗಿ ನಳಕೂಬರನನ್ನು ಸೋಲಿಸಿ ಸೆರೆಹಿಡಿದ. ಅನಂತರ ಉಪರಂಭೆಗೆ ನೀತಿಬೋಧೆ ಮಾಡಿ ಗೆದ್ದ ರಾಜ್ಯವನ್ನು ನಳಕೂಬರನಿಗೇ ಒಪ್ಪಿಸಿದ.						
	(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ